19.12.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ನಿಮ್ಮ ಪ್ರತಿಜ್ಞೆಯಾಗಿದೆ - ಯಾವಾಗ ತಾವು ಬರುತ್ತೀರೋ ಆಗ ನಾವು ನಿಮಗೆ ಬಲಿಹಾರಿಯಾಗುತ್ತೇವೆ, ಈಗ ತಂದೆಯು ನಿಮಗೆ ಪ್ರತಿಜ್ಞೆಯನ್ನು ನೆನಪು ತರಿಸಲು ಬಂದಿದ್ದಾರೆ"

ಪ್ರಶ್ನೆ:
ಯಾವ ಮುಖ್ಯ ವಿಶೇಷತೆಯ ಕಾರಣ ಕೇವಲ ದೇವತೆಗಳಿಗೆ ಮಾತ್ರವೇ ಪೂಜ್ಯರೆಂದು ಹೇಳಬಹುದು?

ಉತ್ತರ:
ದೇವತೆಗಳ ವಿಶೇಷತೆಯೇನೆಂದರೆ - ಅವರು ಎಂದೂ ಯಾರನ್ನೂ ನೆನಪು ಮಾಡುವುದಿಲ್ಲ. ತಂದೆಯನ್ನಾಗಲಿ, ಯಾರದೇ ಚಿತ್ರಗಳನ್ನಾಗಲಿ ನೆನಪು ಮಾಡುವುದಿಲ್ಲ. ಆದ್ದರಿಂದ ಅವರಿಗೆ ಪೂಜ್ಯರೆಂದು ಹೇಳುತ್ತಾರೆ. ಅಲ್ಲಿ ಸುಖವೇ ಸುಖವಿರುತ್ತದೆ ಆದ್ದರಿಂದ ಯಾರನ್ನೂ ನೆನಪು ಮಾಡುವ ಅವಶ್ಯಕತೆಯಿಲ್ಲ. ನೀವೀಗ ಒಬ್ಬ ತಂದೆಯ ನೆನಪಿನಿಂದ ಇಂತಹ ಪೂಜ್ಯರು, ಪಾವನರಾಗುತ್ತೀರಿ. ನಂತರ ಸತ್ಯಯುಗದಲ್ಲಿ ನೆನಪು ಮಾಡುವ ಅವಶ್ಯಕತೆಯೇ ಇರುವುದಿಲ್ಲ.

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳೇ..... ಈಗ ರುಹಾನಿ ಆತ್ಮವೆಂದಂತೂ ಹೇಳುವುದಿಲ್ಲ. ರೂಹ್ ಅಥವಾ ಆತ್ಮ ಒಂದೇ ಮಾತಾಗಿದೆ. ಆತ್ಮಿಕ ಮಕ್ಕಳ ಪ್ರತಿ ತಂದೆಯು ತಿಳಿಸುತ್ತಾರೆ. ಮೊದಲೆಂದೂ ಆತ್ಮಗಳಿಗೆ ಪರಮಪಿತ ಪರಮಾತ್ಮನು ಜ್ಞಾನವನ್ನು ತಿಳಿಸಿಲ್ಲ. ಸ್ವಯಂ ತಂದೆಯೇ ತಿಳಿಸುತ್ತಾರೆ. ನಾನು ಒಂದೇ ಬಾರಿ ಕಲ್ಪದ ಪುರುಷೋತ್ತಮ ಸಂಗಮಯುಗದಲ್ಲಿ ಬರುತ್ತೇನೆ. ಇಡೀ ಕಲ್ಪದಲ್ಲಿ ಸಂಗಮಯುಗದ ವಿನಃ ತಂದೆಯು ಎಂದೂ ಬರುವುದೇ ಇಲ್ಲ ಎಂಬ ಮಾತನ್ನು ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ತಂದೆಯು ಸಂಗಮದಲ್ಲಿಯೇ ಬರುತ್ತಾರೆ. ಯಾವಾಗ ಭಕ್ತಿಯು ಪೂರ್ಣವಾಗುತ್ತದೆ ಮತ್ತು ತಂದೆಯು ಪುನಃ ಮಕ್ಕಳಿಗೆ ಜ್ಞಾನವನ್ನು ಕೊಡುತ್ತಾರೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಇದು ಕೆಲವು ಮಕ್ಕಳಿಗೆ ಬಹಳ ಕಷ್ಟವೆನಿಸುತ್ತದೆ. ಇದು ಅತಿ ಸಹಜವಾಗಿದೆ ಆದರೆ ಬುದ್ಧಿಯಲ್ಲಿ ಸರಿಯಾಗಿ ಕುಳಿತುಕೊಳ್ಳುವುದಿಲ್ಲ. ಆದ್ದರಿಂದ ತಂದೆಯು ಮತ್ತೆ-ಮತ್ತೆ ತಿಳಿಸುತ್ತಿರುತ್ತಾರೆ. ಎಷ್ಟು ತಿಳಿಸಿದರೂ ತಿಳಿದುಕೊಳ್ಳುವುದಿಲ್ಲ. ಶಾಲೆಯಲ್ಲಿ ಶಿಕ್ಷಕರು 12 ತಿಂಗಳವರೆಗೆ ಓದಿಸುತ್ತಾರೆ ಆದರೂ ಸಹ ಕೆಲವರು ಅನುತ್ತೀರ್ಣರಾಗಿ ಬಿಡುತ್ತಾರೆ. ಈ ಬೇಹದ್ದಿನ ತಂದೆಯೂ ಸಹ ಪ್ರತಿನಿತ್ಯವೂ ಮಕ್ಕಳಿಗೆ ಓದಿಸುತ್ತಾರೆ ಆದರೂ ಸಹ ಕೆಲವರಿಗೆ ಧಾರಣೆಯಾಗುತ್ತದೆ, ಕೆಲವರು ಮರೆತು ಹೋಗುತ್ತಾರೆ. ಇದೇ ಮುಖ್ಯ ಮಾತನ್ನು ತಿಳಿಸಲಾಗುತ್ತದೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ನನ್ನೊಬ್ಬನನ್ನೇ ನೆನಪು ಮಾಡಿ ಎಂದು ತಂದೆಯೇ ಹೇಳುತ್ತಾರೆ. ಮತ್ತ್ಯಾವ ಮನುಷ್ಯ ಮಾತ್ರರೂ ಎಂದೂ ಹೇಳಲು ಸಾಧ್ಯವಿಲ್ಲ. ತಂದೆಯು ಹೇಳುತ್ತಾರೆ - ನಾನು ಒಂದೇ ಬಾರಿ ಬರುತ್ತೇನೆ, ಒಂದೇ ಬಾರಿ ನೀವು ಮಕ್ಕಳಿಗೆ ತಿಳಿಸುತ್ತೇನೆ. ಕಲ್ಪದ ನಂತರ ಮತ್ತೆ ಸಂಗಮಯುಗದಲ್ಲಿಯೇ ನೀವು ಮಕ್ಕಳಿಗೇ ತಿಳಿಸುತ್ತೇನೆ. ನೀವೇ ಈ ಜ್ಞಾನವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ, ಮತ್ತ್ಯಾರೂ ತಿಳಿದುಕೊಳ್ಳುವುದೇ ಇಲ್ಲ. ಪ್ರಜಾಪಿತ ಬ್ರಹ್ಮನ ಮುಖವಂಶಾವಳಿಯಾದ ನೀವು ಬ್ರಾಹ್ಮಣರು ಈ ಜ್ಞಾನವನ್ನು ತಿಳಿದುಕೊಳ್ಳುತ್ತೀರಿ. ನಿಮಗೆ ಗೊತ್ತಿದೆ - ಕಲ್ಪದ ಮೊದಲೂ ಸಹ ತಂದೆಯು ಈ ಸಂಗಮದಲ್ಲಿ ಜ್ಞಾನವನ್ನು ತಿಳಿಸಿದ್ದರು, ನೀವು ಬ್ರಾಹ್ಮಣರದೇ ಪಾತ್ರವಿದೆ. ಈ ವರ್ಣಗಳಲ್ಲಿಯೂ ಅವಶ್ಯವಾಗಿ ಸುತ್ತಬೇಕಾಗಿದೆ. ಅನ್ಯ ಧರ್ಮದವರು ಈ ವರ್ಣಗಳಲ್ಲಿ ಬರುವುದಿಲ್ಲ. ಭಾರತವಾಸಿಗಳೇ ಈ ವರ್ಣಗಳಲ್ಲಿ ಬರುತ್ತಾರೆ. ಭಾರತವಾಸಿಗಳೇ ಬ್ರಾಹ್ಮಣರಾಗುತ್ತಾರೆ ಆದ್ದರಿಂದ ತಂದೆಯು ಭಾರತದಲ್ಲಿ ಬರಬೇಕಾಗುತ್ತದೆ. ನೀವು ಪ್ರಜಾಪಿತ ಬ್ರಹ್ಮನ ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ. ಬ್ರಾಹ್ಮಣರ ನಂತರ ದೇವತೆಗಳು ಮತ್ತು ಕ್ಷತ್ರಿಯರು. ಕ್ಷತ್ರಿಯರು ಯಾರೂ ಆಗುವುದಿಲ್ಲ. ನಿಮ್ಮನ್ನು ಬ್ರಾಹ್ಮಣರನ್ನಾಗಿ ಮಾಡುತ್ತೇನೆ, ನಂತರ ಈ ದೇವತೆಗಳಾಗುತ್ತೀರಿ. ಕಲೆಗಳು ಕಡಿಮೆಯಾಗುತ್ತಾ ಹೋದಂತೆ ಅವರಿಗೆ ಕ್ಷತ್ರಿಯರೆಂದು ಹೇಳುತ್ತಾರೆ. ತಾನಾಗಿಯೇ ಕ್ಷತ್ರಿಯರಾಗುತ್ತಾರೆ. ತಂದೆಯು ಬಂದು ಬ್ರಾಹ್ಮಣರನ್ನಾಗಿ ಮಾಡುತ್ತಾರೆ ಮತ್ತೆ ಬ್ರಾಹ್ಮಣರಿಂದ ದೇವತೆಗಳು, ನಂತರ ಅವರೇ ಕ್ಷತ್ರಿಯರಾಗುತ್ತಾರೆ. ಒಬ್ಬರೇ ತಂದೆಯು ಮೂರೂ ಧರ್ಮಗಳನ್ನು ಈಗ ಸ್ಥಾಪನೆ ಮಾಡುತ್ತಾರೆ. ಸತ್ಯ-ತ್ರೇತಾಯುಗದಲ್ಲಿ ಬರುತ್ತಾರೆಂದಲ್ಲ. ಮನುಷ್ಯರು ಇದನ್ನು ತಿಳಿದುಕೊಳ್ಳದ ಕಾರಣ ಸತ್ಯ-ತ್ರೇತಾಯುಗದಲ್ಲಿಯೂ ಬರುತ್ತಾರೆಂದು ಹೇಳಿ ಬಿಡುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ನಾನು ಯುಗ-ಯುಗದಲ್ಲಿಯೂ ಬರುವುದಿಲ್ಲ. ನಾನು ಕಲ್ಪದ ಸಂಗಮಯುಗದಲ್ಲಿ ಒಂದೇ ಬಾರಿ ಬರುತ್ತೇನೆ. ಪ್ರಜಾಪಿತ ಬ್ರಹ್ಮನ ಮೂಲಕ ನಿಮ್ಮನ್ನು ನಾನೇ ಬ್ರಾಹ್ಮಣರನ್ನಾಗಿ ಮಾಡುತ್ತೇನೆ. ನಾನು ಪರಮಧಾಮದಿಂದ ಬರುತ್ತೇನೆ. ಒಳ್ಳೆಯದು - ಬ್ರಹ್ಮನು ಎಲ್ಲಿಂದ ಬರುವರು? ಬ್ರಹ್ಮಾರವರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, ನಾನು ತೆಗೆದುಕೊಳ್ಳುವುದಿಲ್ಲ. ಬ್ರಹ್ಮಾ-ಸರಸ್ವತಿಯೇ ವಿಷ್ಣುವಿನ ಎರಡು ರೂಪ ಲಕ್ಷ್ಮೀ-ನಾರಾಯಣರಾಗುತ್ತಾರೆ, ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತೆ ಅವರದೇ ಬಹಳ ಜನ್ಮಗಳ ಅಂತಿಮದಲ್ಲಿ ಪ್ರವೇಶ ಮಾಡಿ ಇವರನ್ನು ಬ್ರಹ್ಮನನ್ನಾಗಿ ಮಾಡುತ್ತೇನೆ. ಇವರಿಗೆ ಬ್ರಹ್ಮಾ ಎಂದು ಹೆಸರನ್ನಿಡುತ್ತೇನೆ. ಇದು ಇವರ ಮೊದಲಿನ ಹೆಸರಲ್ಲ, ಮಕ್ಕಳ ಜನ್ಮವಾದಾಗ ಜನ್ಮ ದಿನವನ್ನಾಚರಿಸುತ್ತಾರೆ. ಇವರ ಜನ್ಮಪತ್ರಿಯ ಹೆಸರಂತೂ ಲೇಖರಾಜ್ ಎಂದಾಗಿತ್ತು. ಅದು ಬಾಲ್ಯದ ಹೆಸರಾಗಿತ್ತು. ಈಗ ಹೆಸರನ್ನು ಬದಲಾಯಿಸಲಾಗಿದೆ. ಸಂಗಮದಲ್ಲಿ ತಂದೆಯು ಬಂದು ಇವರಲ್ಲಿ ಪ್ರವೇಶ ಮಾಡಿದ್ದಾರೆ. ಯಾವಾಗ ಇವರು ವಾನಪ್ರಸ್ಥ ಸ್ಥಿತಿಯಲ್ಲಿರುವರೋ ಆಗ ಹೆಸರನ್ನು ಬದಲಾಯಿಸಲಾಗುತ್ತದೆ. ಆ ಸನ್ಯಾಸಿಗಳಂತು ಮನೆ ಮಠವನ್ನು ಬಿಟ್ಟು ಹೋಗುತ್ತಾರೆ. ಆಗ ಹೆಸರು ಬದಲಾಗುತ್ತದೆ. ಇವರಂತೂ ಮನೆಯಲ್ಲಿಯೇ ಇರುತ್ತಾರೆ. ಇವರ ಹೆಸರನ್ನು ಬ್ರಹ್ಮಾ ಎಂದು ಇಡಲಾಯಿತು ಏಕೆಂದರೆ ಬ್ರಾಹ್ಮಣರು ಬೇಕಲ್ಲವೆ. ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡು ಪವಿತ್ರ ಬ್ರಾಹ್ಮಣರನ್ನಾಗಿ ಮಾಡುತ್ತಾರೆ. ಪವಿತ್ರರನ್ನಾಗಿ ಮಾಡಲಾಗುತ್ತದೆ. ನೀವು ಜನ್ಮದಿಂದಲೇ ಪವಿತ್ರರಾಗಿದ್ದೀರಿ ಎಂದಲ್ಲ. ನಿಮಗೆ ಪವಿತ್ರರಾಗುವ ಶಿಕ್ಷಣವು ಸಿಗುತ್ತದೆ. ಹೇಗೆ ಪವಿತ್ರರಾಗುವುದು? ಇದು ಮುಖ್ಯ ಮಾತಾಗಿದೆ.

ನಿಮಗೆ ತಿಳಿದಿದೆ - ಭಕ್ತಿಮಾರ್ಗದಲ್ಲಿ ಯಾರೊಬ್ಬರೂ ಪೂಜ್ಯರಿರಲು ಸಾಧ್ಯವಿಲ್ಲ. ಮನುಷ್ಯರು ಗುರು ಮೊದಲಾದವರಿಗೆ ತಲೆ ಬಾಗುತ್ತಾರೆ. ಏಕೆಂದರೆ ಅವರು ಮನೆ ಮಠವನ್ನು ಬಿಟ್ಟು ಪವಿತ್ರರಾಗುತ್ತಾರೆ ಬಾಕಿ ಅವರಿಗೆ ಪೂಜ್ಯರೆಂದು ಹೇಳುವುದಿಲ್ಲ. ಯಾರು ಯಾರನ್ನೂ ನೆನಪು ಮಾಡುವುದಿಲ್ಲವೋ ಅವರಿಗೇ ಪೂಜ್ಯರೆಂದು ಹೇಳಲಾಗುತ್ತದೆ. ಸನ್ಯಾಸಿಗಳಾದರೂ ಬ್ರಹ್ಮ ತತ್ವವನ್ನು ನೆನಪು ಮಾಡುತ್ತಾರೆ, ಪ್ರಾರ್ಥನೆ ಮಾಡುತ್ತಾರಲ್ಲವೆ. ಸತ್ಯಯುಗದಲ್ಲಿ ದೇವಿ-ದೇವತೆಗಳು ಯಾರನ್ನೂ ನೆನಪು ಮಾಡುವುದಿಲ್ಲ. ಈಗ ತಂದೆಯು ತಿಳಿಸುತ್ತಾರೆ - ನೀವು ಒಬ್ಬರನ್ನು ನೆನಪು ಮಾಡಬೇಕಾಗಿದೆ. ಅದಂತೂ ಭಕ್ತಿಯಾಗಿದೆ, ನೀವಾತ್ಮಗಳೂ ಗುಪ್ತವಾಗಿದ್ದೀರಿ, ಆತ್ಮವನ್ನು ಯಥಾರ್ಥ ರೀತಿಯಲ್ಲಿ ಯಾರೂ ತಿಳಿದುಕೊಂಡಿಲ್ಲ. ಸತ್ಯ-ತ್ರೇತಾಯುಗದಲ್ಲಿಯೂ ಶರೀರಧಾರಿಗಳು ತಮ್ಮ ಹೆಸರಿನಿಂದ ಪಾತ್ರವನ್ನಭಿನಯಿಸುತ್ತಾರೆ. ಹೆಸರಿಲ್ಲದೆ ಪಾತ್ರಧಾರಿಗಳಾಗಲು ಸಾಧ್ಯವಿಲ್ಲ. ಎಲ್ಲಿಯೇ ಇರಲಿ, ಶರೀರಕ್ಕೆ ಅವಶ್ಯವಾಗಿ ಹೆಸರಿರುತ್ತದೆ. ಹೆಸರಿಲ್ಲದೆ ಪಾತ್ರವನ್ನು ಹೇಗೆ ಅಭಿನಯಿಸುತ್ತೀರಿ ಆದ್ದರಿಂದ ತಂದೆಯು ತಿಳಿಸಿದ್ದಾರೆ - ಭಕ್ತಿಮಾರ್ಗದಲ್ಲಿ ಹಾಡುತ್ತಾರೆ - ಬಾಬಾ, ತಾವು ಬಂದರೆ ನಾವು ತಮ್ಮನ್ನು ನಮ್ಮವರನ್ನಾಗಿ ಮಾಡಿಕೊಳ್ಳುತ್ತೇವೆ, ನಮಗೆ ಬೇರೆ ಯಾರೂ ಇಲ್ಲ. ನಾವು ನಿಮಗೇ ಬಲಿಹಾರಿಯಾಗುತ್ತೇವೆ ಎಂದು ಆತ್ಮವು ಹೇಳುತ್ತದೆ. ಭಕ್ತಿಮಾರ್ಗದಲ್ಲಿ ಯಾರೆಲ್ಲಾ ದೇಹಧಾರಿಗಳಿದ್ದಾರೆಯೋ, ಯಾರ ಹೆಸರುಗಳನ್ನು ಇಡಲಾಗುತ್ತದೆಯೋ ನಾವು ಅವರನ್ನು ಪೂಜಿಸುವುದಿಲ್ಲ. ಯಾವಾಗ ತಾವು ಬರುತ್ತೀರೋ ಆಗ ನಾವು ನಿಮಗೇ ಬಲಿಹಾರಿಯಾಗುತ್ತೇವೆ ಎಂದು ಹೇಳುತ್ತಾರೆ ಆದರೆ ಯಾವಾಗ ಬರುತ್ತಾರೆ ಎಂಬುದನ್ನೂ ತಿಳಿದುಕೊಂಡಿಲ್ಲ. ಅನೇಕ ದೇಹಧಾರಿಗಳ, ನಾಮಧಾರಿಗಳ ಪೂಜೆ ಮಾಡುತ್ತಿರುತ್ತಾರೆ. ಯಾವಾಗ ಅರ್ಧಕಲ್ಪ ಭಕ್ತಿಯು ಪೂರ್ಣವಾಗುತ್ತದೆಯೋ ಆಗ ತಂದೆಯು ಬರುತ್ತಾರೆ. ಹೇಳುತ್ತಾರೆ - ನಾವು ನಿಮ್ಮ ವಿನಃ ಯಾರನ್ನೂ ನೆನಪು ಮಾಡುವುದಿಲ್ಲ, ತನ್ನ ದೇಹವನ್ನೂ ನೆನಪು ಮಾಡುವುದಿಲ್ಲ ಎಂದು ನೀವು ಜನ್ಮ-ಜನ್ಮಾಂತರದಿಂದಲೂ ಹೇಳುತ್ತಾ ಬಂದಿದ್ದೀರಿ. ಆದರೆ ನನ್ನನ್ನು ಅರಿತುಕೊಂಡೇ ಇಲ್ಲವೆಂದರೆ ನೆನಪು ಹೇಗೆ ಮಾಡುತ್ತೀರಿ! ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿಯಿರಿ ಮತ್ತು ತಂದೆಯನ್ನು ನೆನಪು ಮಾಡಿ. ತಂದೆಯೇ ಪತಿತ-ಪಾವನನಾಗಿದ್ದಾರೆ, ಅವರನ್ನು ನೆನಪು ಮಾಡಿದರೆ ನೀವು ಪಾವನ, ಸತೋಪ್ರಧಾನರಾಗಿ ಬಿಡುತ್ತೀರಿ. ಸತ್ಯ-ತ್ರೇತಾಯುಗದಲ್ಲಿ ಭಕ್ತಿಯಿರುವುದಿಲ್ಲ. ನೀವು ತಂದೆಯನ್ನಾಗಲಿ, ಯಾರದೇ ಚಿತ್ರಗಳನ್ನಾಗಲಿ ನೆನಪು ಮಾಡುವುದಿಲ್ಲ. ಅಲ್ಲಿ ಸುಖವೇ ಸುಖವಿರುತ್ತದೆ. ನೀವು ಎಷ್ಟು ಸಮೀಪ ಬರತೊಡಗುತ್ತೀರೋ ಅಷ್ಟು ಕರ್ಮಾತೀತ ಸ್ಥಿತಿಯಾಗುತ್ತಾ ಹೋಗುವುದು. ಸತ್ಯಯುಗದಲ್ಲಿ ಹೊಸ ಪ್ರಪಂಚ, ಹೊಸ ಮನೆಯಲ್ಲಿ ಬಹಳ ಖುಷಿಯಿರುತ್ತದೆ ನಂತರ 25% ಹಳೆಯದಾದ ನಂತರ ಹೇಗೆ ಸ್ವರ್ಗವೇ ಮರೆತು ಹೋಗುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಬಾಬಾ, ನಾವು ತಮ್ಮವರೇ ಆಗುತ್ತೇವೆ, ತಮ್ಮಿಂದಲೇ ಕೇಳುತ್ತೇವೆ ಎಂದು ಹಾಡುತ್ತಿದ್ದಿರಿ ಅಂದಮೇಲೆ ಅವಶ್ಯವಾಗಿ ತಾವು ಪರಮಾತ್ಮನಿಗೇ ಹೇಳುತ್ತೀರಲ್ಲವೆ. ಆತ್ಮವು ಪರಮಾತ್ಮ ತಂದೆಗೆ ಹೇಳುತ್ತದೆ - ಆತ್ಮವು ಸೂಕ್ಷ್ಮ ಬಿಂದುವಾಗಿದೆ, ಅದನ್ನು ನೋಡಲು ದಿವ್ಯ ದೃಷ್ಟಿ ಬೇಕು. ಆತ್ಮದ ಧ್ಯಾನ ಮಾಡಲು ಸಾಧ್ಯವಿಲ್ಲ. ನಾವಾತ್ಮಗಳು ಇಷ್ಟು ಸೂಕ್ಷ್ಮ ಬಿಂದುಗಳಾಗಿದ್ದೇವೆ. ಈ ರೀತಿ ತಿಳಿದು ನೆನಪು ಮಾಡುವುದು ಪರಿಶ್ರಮವಿದೆ. ಯಾರೂ ಸಹ ಆತ್ಮದ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನ ಪಡುವುದಿಲ್ಲ. ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿಯೇ ಪ್ರಯತ್ನ ಪಡುತ್ತಾರೆ. ಪರಮಾತ್ಮನನ್ನು ಕುರಿತೇ ಈ ಹೇಳಿಕೆಯಿದೆ - ಅವರು ಕೋಟಿ ಸೂರ್ಯ ತೇಜೋಮಯನಾಗಿದ್ದಾರೆ. ಯಾರಿಗಾದರೂ ಸಾಕ್ಷಾತ್ಕಾರವಾದಾಗ ಅವರು ಬಹಳ ತೇಜೋಮಯನಾಗಿದ್ದರು ಎಂದು ಹೇಳುತ್ತಾರೆ ಏಕೆಂದರೆ ಮೊದಲಿನಿಂದ ಅದನ್ನೇ ಕೇಳಿದ್ದಾರೆ. ಯಾರ ಪ್ರತಿ ನೌಧಾಭಕ್ತಿ ಮಾಡುವರೋ ಅವರನ್ನೇ ಸಾಕ್ಷಾತ್ಕಾರದಲ್ಲಿ ನೋಡುತ್ತಾರೆ ಇಲ್ಲವೆಂದರೆ ವಿಶ್ವಾಸ ಕುಳಿತುಕೊಳ್ಳುವುದಿಲ್ಲ. ತಂದೆಯು ಹೇಳುತ್ತಾರೆ - ಆತ್ಮನನ್ನೇ ನೋಡಿಲ್ಲವೆಂದರೆ ಪರಮಾತ್ಮನನ್ನು ಹೇಗೆ ನೋಡುವರು! ಆತ್ಮನನ್ನು ಕಣ್ಣುಗಳಿಂದ ನೋಡಲು ಹೇಗೆ ಸಾಧ್ಯ? ಮತ್ತೆಲ್ಲರಿಗೂ ಶರೀರದ ಚಿತ್ರವಿದೆ, ಹೆಸರಿದೆ ಆದರೆ ಆತ್ಮವು ಬಿಂದುವಾಗಿದೆ, ಅತಿ ಸೂಕ್ಷ್ಮವಾಗಿದೆ, ಅದನ್ನು ಹೇಗೆ ನೋಡುವುದು? ಮನುಷ್ಯರು ಇದಕ್ಕಾಗಿ ಬಹಳ ಪ್ರಯತ್ನ ಪಡುತ್ತಾರೆ ಆದರೆ ಈ ಸ್ಥೂಲ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಆತ್ಮಕ್ಕೆ ಜ್ಞಾನದ ಅವ್ಯಕ್ತ ಕಣ್ಣುಗಳು ಸಿಗುತ್ತವೆ.

ನೀವೀಗ ತಿಳಿದುಕೊಂಡಿದ್ದೀರಿ - ನಾವಾತ್ಮಗಳು ಅತಿ ಸೂಕ್ಷ್ಮವಾಗಿದ್ದೇವೆ. ನಾನಾತ್ಮನಲ್ಲಿ 84 ಜನ್ಮಗಳ ಪಾತ್ರವು ನಿಗಧಿಯಾಗಿದೆ ಅದನ್ನು ನಾನು ಪುನರಾವರ್ತಿಸಬೇಕಾಗಿದೆ. ಶ್ರೇಷ್ಠರನ್ನಾಗಿ ಮಾಡಿಕೊಳ್ಳಲು ತಂದೆಯ ಶ್ರೀಮತ ಸಿಗುತ್ತದೆ ಅಂದಮೇಲೆ ಅದರಂತೆಯೇ ನಡೆಯಬೇಕು. ನೀವು ದೈವೀ ಗುಣಗಳನ್ನೂ ಧಾರಣೆ ಮಾಡಬೇಕು, ಆಹಾರ-ಪಾನೀಯಗಳು ಮತ್ತು ಚಲನೆಯು ಬಹಳ ರಾಯಲ್ ಆಗಿರಬೇಕು. ನೀವು ದೇವತೆಗಳಾಗುತ್ತೀರಿ, ದೇವತೆಗಳು ಸ್ವಯಂ ಪೂಜ್ಯರಾಗಿದ್ದಾರೆ. ಅವರು ಎಂದೂ ಯಾರಿಗೂ ಪೂಜೆ ಮಾಡುವುದಿಲ್ಲ. ಡಬಲ್ ಕಿರೀಟಧಾರಿಗಳಲ್ಲವೆ! ಮತ್ತು ಪೂಜ್ಯರಲ್ಲವೆ! ಸತ್ಯಯುಗದಲ್ಲಿ ಯಾರನ್ನೂ ಪೂಜಿಸುವ ಅವಶ್ಯಕತೆಯೇ ಇರುವುದಿಲ್ಲ. ಬಾಕಿ ಒಬ್ಬರು ಇನ್ನೊಬ್ಬರಿಗೆ ಗೌರವ ಅವಶ್ಯವಾಗಿ ಕೊಡುತ್ತಾರೆ. ಹೀಗೆ ನಮನ ಮಾಡುವುದಕ್ಕೆ ಗೌರವ ಎಂದು ಹೇಳಲಾಗುತ್ತದೆ. ಹೃದಯದಲ್ಲಿ ಅವರನ್ನೂ ನೆನಪು ಮಾಡಬೇಕು ಎಂದಲ್ಲ. ಗೌರವ ಕೊಡಲೇಬೇಕಾಗಿದೆ. ಹೇಗೆ ರಾಷ್ಟ್ರಪತಿಯಿದ್ದಾರೆ. ಎಲ್ಲರೂ ಅವರಿಗೆ ಗೌರವ ಕೊಡುತ್ತಾರೆ ಏಕೆಂದರೆ ಅವರು ಉನ್ನತ ಪದವಿಯವರೆಂದು ಗೊತ್ತಿದೆ ಆದರೆ ಅವರಿಗೆ ಪೂಜೆ ಮಾಡುವುದಲ್ಲ. ತಂದೆಯು ತಿಳಿಸುತ್ತಾರೆ - ಈ ಜ್ಞಾನಮಾರ್ಗವು ಸಂಪೂರ್ಣ ಭಿನ್ನವಾಗಿದೆ, ಇದರಲ್ಲಿ ಕೇವಲ ತಮ್ಮನ್ನು ಆತ್ಮನೆಂದು ತಿಳಿಯಬೇಕಾಗಿದೆ. ಇದನ್ನೇ ನೀವು ಮರೆತು ಹೋಗಿದ್ದೀರಿ. ಶರೀರದ ಹೆಸರನ್ನು ನೆನಪು ಮಾಡಿಕೊಂಡಿದ್ದೀರಿ. ಅವಶ್ಯವಾಗಿ ಹೆಸರಿನಿಂದಲೇ ಕೆಲಸ ಮಾಡಬೇಕಾಗಿದೆ. ಹೆಸರಿಲ್ಲದೆ ಅನ್ಯರನ್ನು ಹೇಗೆ ಕರೆಯುತ್ತೀರಿ? ಭಲೆ ನೀವು ಶರೀರಧಾರಿಯಾಗಿ ಪಾತ್ರವನ್ನಭಿನಯಿಸುತ್ತೀರಿ ಆದರೆ ಬುದ್ಧಿಯಿಂದ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ಕೃಷ್ಣನ ಭಕ್ತರು ನಾವು ಕೃಷ್ಣನನ್ನೇ ನೆನಪು ಮಾಡಬೇಕೆಂದು ತಿಳಿಯುತ್ತಾರೆ. ಎಲ್ಲಿ ನೋಡಿದರಲ್ಲಿ ಕೃಷ್ಣನೇ ಕೃಷ್ಣನಿದ್ದಾರೆ. ನಾನೂ ಕೃಷ್ಣ, ನೀವೂ ಕೃಷ್ಣನೆಂದು ಹೇಳುತ್ತಾರೆ. ಅರೆ! ನಿಮ್ಮ ಹೆಸರೇ ಬೇರೆ, ಅವರ ಹೆಸರೇ ಬೇರೆಯಾಗಿದೆ ಅಂದಮೇಲೆ ಎಲ್ಲರೂ ಕೃಷ್ಣರಾಗಲು ಹೇಗೆ ಸಾಧ್ಯ. ಎಲ್ಲರ ಹೆಸರು ಕೃಷ್ಣನೆಂದು ಇಡುವುದಿಲ್ಲ. ಮನುಷ್ಯರಿಗೆ ಏನು ಬರುತ್ತದೆಯೋ ಅದನ್ನು ಹೇಳುತ್ತಿರುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಭಕ್ತಿಮಾರ್ಗದ ಎಲ್ಲಾ ಚಿತ್ರಗಳನ್ನು ಮರೆತು ಒಬ್ಬ ತಂದೆಯನ್ನು ನೆನಪು ಮಾಡಿ, ಚಿತ್ರಗಳಿಗಂತೂ ನೀವು ಪತಿತ-ಪಾವನನೆಂದು ಹೇಳುವುದಿಲ್ಲ. ಹನುಮಂತ ಮೊದಲಾದವರು ಪತಿತ-ಪಾವನರಲ್ಲ. ಅನೇಕ ಚಿತ್ರಗಳಿವೆ, ಯಾರೂ ಪತಿತ-ಪಾವನರಲ್ಲ. ಯಾವುದೇ ದೇವಿ ಇತ್ಯಾದಿ, ಯಾರಿಗೆ ಶರೀರವಿದೆಯೋ ಅವರಿಗೆ ಪತಿತ-ಪಾವನರೆಂದು ಹೇಳುವುದಿಲ್ಲ. ಆರು-ಎಂಟು ಭುಜಗಳುಳ್ಳ ದೇವಿಯರನ್ನೂ ಮಾಡಿಸುತ್ತಾರೆ, ಎಲ್ಲವೂ ತಮ್ಮ ಬುದ್ಧಿಯಿಂದ. ಇವರು ಯಾರಾಗಿದ್ದಾರೆ ಎಂಬುದನ್ನಂತೂ ತಿಳಿದುಕೊಂಡಿಲ್ಲ. ಇವರು ಪತಿತ-ಪಾವನ ತಂದೆಯ ಸಂತಾನರು, ಸಹಯೋಗಿಗಳಾಗಿದ್ದಾರೆಂದು ಯಾರಿಗೂ ಗೊತ್ತಿಲ್ಲ. ನಿಮ್ಮ ರೂಪವಂತೂ ಸಾಧಾರಣವಾಗಿದೆ. ಈ ಶರೀರವೂ ವಿನಾಶವಾಗಿ ಬಿಡುತ್ತದೆ. ನಿಮ್ಮ ಚಿತ್ರಗಳು ಉಳಿಯುತ್ತವೆ ಎಂದಲ್ಲ. ಎಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ವಾಸ್ತವದಲ್ಲಿ ದೇವಿಯರು ನೀವಾಗಿದ್ದೀರಿ. ಸೀತಾ ದೇವಿ ಅಥವಾ ಇಂತಹ ದೇವಿಯೆಂದು ಹೆಸರನ್ನಿಡುತ್ತಾರೆ. ರಾಮ ದೇವತಾ ಎಂದು ಹೇಳುವುದಿಲ್ಲ. ಇಂತಹ ದೇವಿ ಅಥವಾ ಶ್ರೀಮತಿ ಎಂದು ಹೇಳುತ್ತಾರೆ ಆದರೆ ಇದೂ ತಪ್ಪಾಗಿದೆ. ಈಗ ಪಾವನರಾಗಲು ಪುರುಷಾರ್ಥ ಮಾಡಬೇಕಾಗಿದೆ. ಪತಿತರಿಂದ ಪಾವನರನ್ನಾಗಿ ಮಾಡಿ ಎಂದು ನೀವು ಹೇಳುತ್ತೀರಿ. ಲಕ್ಷ್ಮೀ-ನಾರಾಯಣರನ್ನಾಗಿ ಮಾಡಿ ಎಂದು ಹೇಳುವುದಿಲ್ಲ. ಪತಿತರಿಂದ ಪಾವನರನ್ನಾಗಿ ತಂದೆಯೇ ಮಾಡುತ್ತಾರೆ. ನರನಿಂದ ನಾರಾಯಣನನ್ನಾಗಿಯೂ ಅವರೇ ಮಾಡುತ್ತಾರೆ. ಪತಿತ-ಪಾವನನೆಂದು ನಿರಾಕಾರನಿಗೆ ಹೇಳುತ್ತಾರೆ. ಸತ್ಯ ನಾರಾಯಣನ ಕಥೆಯನ್ನು ತಿಳಿಸುವವರು ಮತ್ತೆ ಬೇರೆಯದನ್ನಾಗಿ ತೋರಿಸಿದರೆ ಬಾಬಾ ಸತ್ಯ ನಾರಾಯಣನ ಕಥೆಯನ್ನು ಹೇಳಿ, ಅಮರರನ್ನಾಗಿ ಮಾಡಿ, ನರನಿಂದ ನಾರಾಯಣರನ್ನಾಗಿ ಮಾಡಿ ಎಂದು ಹೇಳುವುದಿಲ್ಲ. ಕೇವಲ ಬಂದು ಪಾವನರನ್ನಾಗಿ ಮಾಡಿ ಎಂದು ಹೇಳುತ್ತಾರೆ. ತಂದೆಯೇ ಸತ್ಯ ನಾರಾಯಣನ ಕಥೆಯನ್ನು ತಿಳಿಸಿ ಪಾವನರನ್ನಾಗಿ ಮಾಡುತ್ತಾರೆ ಮತ್ತೆ ನೀವು ಅನ್ಯರಿಗೂ ಸತ್ಯ ಕಥೆಯನ್ನು ತಿಳಿಸುತ್ತೀರಿ. ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ, ನೀವೇ ತಿಳಿದುಕೊಂಡಿದ್ದೀರಿ. ಭಲೆ ನಿಮ್ಮ ಮನೆಯಲ್ಲಿ ಮಿತ್ರ ಸಂಬಂಧಿಗಳು, ಸಹೋದರ-ಸಹೋದರಿ ಮೊದಲಾದವರಿದ್ದಾರೆ ಆದರೆ ಅವರೂ ಸಹ ತಿಳಿದುಕೊಂಡಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸ್ವಯಂನ್ನು ಶ್ರೇಷ್ಠ ಮಾಡಿಕೊಳ್ಳಲು ತಂದೆಯ ಯಾವ ಶ್ರೀಮತ ಸಿಗುತ್ತಿದೆಯೋ ಅದರಂತೆಯೇ ನಡೆಯಬೇಕು. ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಆಹಾರ-ಪಾನೀಯ, ಚಲನೆ ಎಲ್ಲವೂ ರಾಯಲ್ ಆಗಿರಬೇಕು.

2. ಒಬ್ಬರು ಇನ್ನೊಬ್ಬರನ್ನು ನೆನಪು ಮಾಡಬಾರದು ಆದರೆ ಗೌರವವನ್ನು ಖಂಡಿತ ಕೊಡಬೇಕಾಗಿದೆ. ಪಾವನರಾಗುವ ಪುರುಷಾರ್ಥ ಮಾಡಬೇಕು ಮತ್ತು ಮಾಡಿಸಬೇಕಾಗಿದೆ.

ವರದಾನ:
ಸರ್ವ ಖಜಾನೆಗಳನ್ನು ಸಮಯದಲ್ಲಿ ಉಪಯೋಗಿಸಿ ನಿರಂತರ ಖುಷಿಯ ಅನುಭವ ಮಾಡುವಂತಹ ಅದೃಷ್ಟಶಾಲಿ ಆತ್ಮ ಭವ.

ಬಾಪ್ದಾದಾರವರ ಮುಖಾಂತರ ಬ್ರಾಹ್ಮಣ ಜನ್ಮವಾದೊಡನೆ ಇಡೀ ದಿನಕ್ಕಾಗಿ ಅನೇಕ ಶ್ರೇಷ್ಟ ಖುಷಿಯ ಖಜಾನೆ ಪ್ರಾಪ್ತಿಯಾಗುವುದು. ಆದ್ದರಿಂದ ನಿಮ್ಮ ಹೆಸರಲ್ಲಿಯೇ ಇಲ್ಲಿಯವರೆಗೆ ಅನೇಕ ಭಕ್ತರು ಅಲ್ಪಕಾಲದ ಖುಷಿಯಲ್ಲಿ ಬಂದು ಬಿಡುತ್ತಾರೆ, ನಿಮ್ಮ ಜಡ ಚಿತ್ರಗಳನ್ನು ನೋಡಿ ಖುಷಿಯಿಂದ ನಾಟ್ಯವಾಡಲು ತೊಡಗುತ್ತಾರೆ. ಈ ರೀತಿ ನೀವೆಲ್ಲರೂ ಅದೃಷ್ಟಶಾಲಿಗಳಾಗಿರುವಿರಿ, ಬಹಳ ಖಜಾನೆ ಸಿಕ್ಕಿದೆ ಆದರೆ ಕೇವಲ ಸಮಯದಲ್ಲಿ ಉಪಯೋಗಿಸಿ. ಬೀಗದ ಕೈಯನ್ನು ಸದಾ ಎದುರಿನಲ್ಲಿಟ್ಟುಕೊಳ್ಳಿ ಅರ್ಥಾತ್ ಸದಾ ಸ್ಮೃತಿಯಲ್ಲಿಟ್ಟುಕೊಳ್ಳಿ ಮತ್ತು ಸ್ಮತಿಯನ್ನು ಸ್ವರೂಪದಲ್ಲಿ ತನ್ನಿ ಆಗ ನಿರಂತರ ಖುಶಿಯ ಅನುಭವ ಆಗುತ್ತಿರುತ್ತದೆ.

ಸ್ಲೋಗನ್:
ತಂದೆಯ ಶ್ರೇಷ್ಠ ಆಸೆಗಳ ದೀಪವನ್ನು ಬೆಳಗಿಸುವಂತಹವರೇ ಕುಲ ದೀಪಕರಾಗಿರುವಿರಿ.