04.12.18 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ – ಸದಾ
ಪವಿತ್ರರಾಗುವುದಕ್ಕಾಗಿ ನಿಮ್ಮ ಆತ್ಮಿಕ ಯೋಗವಾಗಿದೆ, ಏಕೆಂದರೆ ನೀವು ಪವಿತ್ರತೆಯ ಸಾಗರನೊಂದಿಗೆ
ಯೋಗವನ್ನು ಜೋಡಿಸುತ್ತೀರಿ, ಪವಿತ್ರ ಜಗತ್ತು ಸ್ಥಾಪನೆ ಮಾಡುತ್ತೀರಿ.”
ಪ್ರಶ್ನೆ:
ನಿಶ್ಚಯಬುದ್ಧಿ
ಮಕ್ಕಳಿಗೆ ಮೊದಮೊದಲು ಯಾವ ನಿಶ್ಚಯ ಪಕ್ಕಾ ಮಾಡಬೇಕಾಗಿದೆ? ಆ ನಿಶ್ಚಯದ ಲಕ್ಷಣ ಏನಾಗಿದೆ?
ಉತ್ತರ:
ನಾವು ಒಬ್ಬ
ತಂದೆಯ ಮಕ್ಕಳಾಗಿದ್ದೇವೆ, ತಂದೆಯಿಂದ ನಮಗೆ ದೈವಿ ಸ್ವರಾಜ್ಯ ಸಿಗುತ್ತದೆ. ಇದು ಮೊದಮೊದಲ ಪಕ್ಕಾ
ನಿಶ್ಚಯವಾಗಿದೆ. ನಿಶ್ಚಯವಾದರೆ ತಕ್ಷಣ ಬುದ್ಧಿಯಲ್ಲಿ ಬರುತ್ತದೆ, ನಾವು ಏನು ಭಕ್ತಿ ಮಾಡಿದ್ದೇವೆ
ಅದೀಗ ಪೂರ್ಣವಾಯಿತು, ಈಗ ಸ್ವಯಂ ಭಗವಾನ್ ನಮಗೆ ಸಿಕ್ಕಿದ್ದಾರೆ. ನಿಶ್ಚಯಬುದ್ಧಿ ಮಕ್ಕಳೇ ವಾರಿಸ್
ಆಗುತ್ತಾರೆ.
ಗೀತೆ:
ಓ ದೂರದ
ಪ್ರಯಾಣಿಕನೇ
ಓಂ ಶಾಂತಿ.
ತಂದೆಯು ಎಲ್ಲರಿಗೆ ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು ಕೊಡಲು ಬರುತ್ತಾರೆ. ಎಲ್ಲರ ಸದ್ಗತಿದಾತ,
ಜೀವನ್ಮುಕ್ತಿ ದಾತನು ಒಬ್ಬರೇ ಆಗಿದ್ದಾರೆ ಎಂಬ ಗಾಯನವಿದೆ. ಒಂದು ಸೆಕೆಂಡಿನಲ್ಲಿ
ಜೀವನ್ಮುಕ್ತಿಯೆಂದು ಏಕೆ ಹೇಳುತ್ತಾರೆ? ಹೇಗೆ ರಾಜಾ ಜನಕನ ಉದಾಹರಣೆಯಿದೆ. ಅವರ ಹೆಸರು
ಜನಕನಾಗಿತ್ತು, ಅವರೇ ಭವಿಷ್ಯದಲ್ಲಿ ಅನುಜನಕನಾಗುತ್ತಾರೆ. ಜನಕನಿಗೆ ಒಂದು ಸೆಕೆಂಡಿನಲ್ಲಿ
ಜೀವನ್ಮುಕ್ತಿ ಸಿಕ್ಕಿತೆಂದು ಹೇಳುತ್ತಾರೆ. ಆದರೆ ಜೀವನ್ಮುಕ್ತಿಯಂತೂ ಸತ್ಯ-ತ್ರೇತಾಯುಗದಲ್ಲಿ
ಇರುತ್ತದೆ ಎಂದು ಹೇಳಲಾಗುತ್ತದೆ. ಗುರು ಜನರು ಕಿವಿಯಲ್ಲಿ ಮಂತ್ರವನ್ನು ಹೇಳುತ್ತಾರೆ, ಅದನ್ನು
ವಶೀಕರಣ ಮಂತ್ರವೆಂದೂ ಹೇಳುತ್ತಾರೆ. ಅವರಂತೂ ಎಲ್ಲರೂ ಮಂತ್ರವನ್ನೇ ಕೊಡುತ್ತಾರೆ. ಆದರೆ ನಿಮಗೆ
ಮಹಾಮಂತ್ರ ಸಿಗುತ್ತದೆ, ಜೀವನ್ಮುಕ್ತಿಯ ಮಂತ್ರ - ಈ ಮಂತ್ರವನ್ನು ಯಾರು ಕೊಡುತ್ತಾರೆ?
ಬ್ರಹ್ಮಾಕುಮಾರ-ಕುಮಾರಿಯರು. ಅವರಿಗೆ ಈ ಮಂತ್ರವು ಎಲ್ಲಿಂದ ದೊರಕಿತು? ಆ ಸದ್ಗುರುವಿನಿಂದ.
ಸರ್ವೋತ್ತಮರಂತೂ ಒಬ್ಬರೇ ತಂದೆಯಾಗಿದ್ದಾರೆ. ಮತ್ತೆ ತಾವು ಮಕ್ಕಳು ಸರ್ವೋತ್ತಮರಾಗುತ್ತೀರಿ.
ಅವರಲ್ಲಿ ಸರ್ವೋತ್ತಮ ಗುರುಗಳಿರುತ್ತಾರೆ, ನೀವೂ ಸಹ ಸದ್ಗುರುವಿನ ಮಕ್ಕಳು ಗುರುಗಳಾಗಿದ್ದೀರಿ.
ಗೀತೆಯನ್ನು ಹೇಳುವವರಿಗೂ ಸಹ ಗುರುಗಳೆಂದು ಕರೆಯಲಾಗುತ್ತದೆ. ನಂಬರ್ವಾರಂತೂ ಇರುತ್ತಾರೆ. ನೀವೂ ಸಹ
ಸತ್ಯವನ್ನು ಹೇಳುವಂತಹ ಗುರುಗಳಾಗಿದ್ದೀರಿ, ನೀವು ಎಂದೂ ಈಶ್ವರನ ಬಗ್ಗೆ ಅಸತ್ಯವನ್ನು
ಹೇಳುವುದಿಲ್ಲ. ಮೊಟ್ಟ ಮೊದಲು ನೀವು ಪವಿತ್ರತೆಯ ಬಗ್ಗೆ ತಿಳಿಸಿ ಕೊಡುತ್ತೀರಿ. ನಾವು ಎಂದೂ ಸಹ
ವಿಕಾರದಲ್ಲಿ ಹೋಗುವುದಿಲ್ಲವೆಂದು ತಂದೆಯೊಂದಿಗೆ ಪ್ರತಿಜ್ಞೆ ಮಾಡಿ ಎಂದು ಹೇಳುತ್ತೀರಿ. ಸುಳ್ಳು
ಹೇಳದೇ ಇರುವುದಂತೂ ಸಾಧಾರಣವಾದ ಮಾತಾಗಿದೆ. ಸುಳ್ಳಂತೂ ಅನೇಕರು ಹೇಳುತ್ತಿರುತ್ತಾರೆ. ಆದರೆ ಇಲ್ಲಿ
ಅಂತಹ ಮಾತಿಲ್ಲ. ಇಲ್ಲಿ ಪವಿತ್ರತೆಯ ಮಾತಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ನಾವು ಕಮಲಪುಷ್ಫ
ಸಮಾನ ಪವಿತ್ರರಾಗಿರುತ್ತೇವೆಂದು ಈ ಅಂತಿಮ ಜನ್ಮದಲ್ಲಿ ನಾವು ತಂದೆಯೊಂದಿಗೆ ಪ್ರತಿಜ್ಞೆ
ಮಾಡುತ್ತೇವೆ. ಆದುದರಿಂದ ಇಲ್ಲಿ ಪವಿತ್ರತೆಯ ಮಾತಾಗಿದೆ. ಇದು ಬಹಳ ದೊಡ್ಡ ಗುರಿಯಾಗಿದೆ, ಇದಂತೂ
ಸಾಧ್ಯವೇ ಇಲ್ಲವೆಂದು ಅವರು ಹೇಳುತ್ತಾರೆ. ಏಕೆ ಸಾಧ್ಯವಿಲ್ಲವೆಂದು ನೀವು ಹೇಳುತ್ತೀರಿ. ಇಲ್ಲಂತೂ
ಕಮಲಪುಷ್ಫ ಸಮಾನವೆಂದು ಗಾಯನ ಮಾಡಲ್ಪಟ್ಟಿದೆ....... ಈ ದೃಷ್ಟಾಂತವನ್ನು ಶಾಸ್ತ್ರಗಳಲ್ಲಿ
ಬರೆಯಲ್ಪಟ್ಟಿದೆ. ಅವಶ್ಯವಾಗಿ ತಂದೆಯೇ ಇಂತಹ ಶಿಕ್ಷಣವನ್ನು ಕೊಟ್ಟಿದ್ದಾರೆ. ಇದು ಭಗವಾನುವಾಚ ಅಥವಾ
ಬ್ರಾಹ್ಮಣ ಉವಾಚವಾಗಿದೆ. ಭಗವಂತನು ಎಲ್ಲರಿಗೂ ಹೇಳುವುದಿಲ್ಲ, ಬ್ರಾಹ್ಮಣ ಮಕ್ಕಳಿಗೇ ಕೇಳುತ್ತಾರೆ.
ಈ ಮಾತನ್ನು ನೀವು ಎಲ್ಲರಿಗೂ ತಿಳಿಸಿ ಕೊಡಬೇಕು. ಮೂಲ ಮಾತು ಪವಿತ್ರತೆಯದ್ದಾಗಿದೆ. ಜನಕನ
ರೀತಿಯಲ್ಲಿ ಕಮಲಪುಷ್ಫ ಸಮಾನ ಪವಿತ್ರರಾಗಬೇಕು. ಅದೇ ಜನಕ ಮತ್ತೆ ಅನುಜನಕನಾಗುತ್ತಾನೆ. ಹೇಗೆ ರಾಧೆ
ಅನುರಾಧೆಯಾಗುತ್ತಾಳೆ. ಇಲ್ಲಿ ಯಾರಾದರೂ ನಾರಾಯಣನೆಂದು ಹೆಸರಿಟ್ಟುಕೊಂಡಿದ್ದೇ ಆದರೆ ಭವಿಷ್ಯದಲ್ಲಿ
ಅನುನಾರಾಯಣನಾಗುತ್ತಾರೆ. ಇದು ಸರಿಯಾದ ಮಾತಾಗಿದೆ. ನಿಮ್ಮ ಬಳಿ ಯಾರೇ ಬರುತ್ತಾರೆಂದರೆ
ತಿಳಿಸಿಕೊಡಬೇಕು. ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಕೇಳಿದ್ದೇವೆ. ಗೃಹಸ್ಥ
ವ್ಯವಹಾರದಲ್ಲಿರುತ್ತಾ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯತೆಯಿದೆ. ನಾವು ಅನುಭವದಿಂದ
ಹೇಳುತ್ತೇವೆ, ಕಟ್ಟು ಕಥೆ ಹೇಳುತ್ತಿಲ್ಲ. ಭಗವಾನುವಾಚ – ಮುಖ್ಯ ಮಾತನ್ನು ತಿಳಿಸಿ ಕೊಡಬೇಕು -
ಭಗವಂತನು ಎಲ್ಲರಿಗೂ ತಂದೆಯಾಗಿದ್ದಾರೆ. ಅವಶ್ಯವಾಗಿ ಜೀವನ್ಮುಕ್ತಿದಾತನೂ ಅವರೇ ಆಗಿದ್ದಾರೆ. ಇದು
ಪ್ರವೃತ್ತಿ ಮಾರ್ಗವಾಗಿದೆ. ಸನ್ಯಾಸಿಗಳದಂತೂ ನಿವೃತ್ತಿ ಮಾರ್ಗವಾಗಿದೆ. ಅವರು ಎಂದೂ ಸಹ
ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಅವರಂತೂ ಮನೆ-ಮಠವನ್ನು ಬಿಟ್ಟು ಓಡಿ ಹೋಗುವವರಾಗಿದ್ದಾರೆ.
ಅವರು ಈ ಜ್ಞಾನವನ್ನು ನೀಡಲು ಸಾಧ್ಯವಿಲ್ಲ. ಇದು ರಾಜಯೋಗವಾಗಿದೆ, ಗೃಹಸ್ಥ ವ್ಯವಹಾರದಲ್ಲಿರುತ್ತಾ
ಕಮಲಪುಷ್ಫ ಸಮಾನ ಪವಿತ್ರರಾಗಿರಬೇಕು. ಸತ್ಯಯುಗದಲ್ಲಿ ಭಾರತವು ಪವಿತ್ರ ಪ್ರವೃತ್ತಿ ಮಾರ್ಗವಾಗಿತ್ತು,
ನಿರ್ವಿಕಾರಿ ಪ್ರಪಂಚವಾಗಿತ್ತು. ರಾಜಧಾನಿಯಲ್ಲಿ ಸ್ತ್ರೀ-ಪುರುಷ ಇಬ್ಬರೂ ಬೇಕು. ಗೃಹಸ್ಥ
ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನ ಪವಿತ್ರವಾಗಿರಲು ಸಾಧ್ಯವಿದೆ. ನಾವು ಅನುಭವಿಗಳಾಗಿದ್ದೇವೆ
- ಈ ರೀತಿ ತಿಳಿಸಿ ಕೊಡಬೇಕಾಗುತ್ತದೆ. ಪವಿತ್ರರಾಗಿ ತಂದೆಯ ಮೂಲಕ ಪವಿತ್ರ ಪ್ರಪಂಚದ
ಮಾಲೀಕರಾಗುತ್ತೇವೆ ಎಂಬುದನ್ನು ನಾವು ತಿಳಿದಿದ್ದೇವೆ. ಮೊದಲು ಪವಿತ್ರ ಪ್ರವೃತ್ತಿ ಮಾರ್ಗವಿತ್ತು,
ಈಗಂತೂ ಅಪವಿತ್ರ ಪ್ರವೃತ್ತಿ ಮಾರ್ಗವಾಗಿದೆ. ಇದು ಭ್ರಷ್ಟಾಚಾರಿ ಪ್ರಪಂಚವಾಗಿದೆ, ಅದು
ಶ್ರೇಷ್ಠಾಚಾರಿ ಪ್ರಪಂಚವಾಗಿತ್ತು. ರಾವಣನು ಭ್ರಷ್ಟಾಚಾರಿಯನ್ನಾಗಿ ಮಾಡುತ್ತಾನೆ, ರಾಮನು
ಶ್ರೇಷ್ಠಾಚಾರಿಯನ್ನಾಗಿ ಮಾಡುತ್ತಾರೆ. ಅರ್ಧಕಲ್ಪ ರಾವಣ ರಾಜ್ಯ ನಡೆಯುತ್ತದೆ, ಭ್ರಷ್ಟಾಚಾರಿ
ಪ್ರಪಂಚದಲ್ಲಿ ಭಕ್ತಿಮಾರ್ಗವಿದೆ. ಭ್ರಷ್ಟಾಚಾರವಿರುವ ಕಾರಣ ದಾನ-ಪುಣ್ಯವನ್ನು ಮಾಡುತ್ತಾರೆ.
ಮನುಷ್ಯನು ಎಷ್ಟು ಭಕ್ತಿ, ದಾನ-ಪುಣ್ಯವನ್ನು ಮಾಡುತ್ತಾನೆಯೋ ಅದರಿಂದ ಭಗವಂತ ಸಿಗುತ್ತಾರೆಂದು
ತಿಳಿದಿದ್ದಾರೆ. ಭಗವಂತನ ಭಕ್ತಿಯನ್ನು ಮಾಡುತ್ತಾರೆ, ನಮ್ಮನ್ನು ಶ್ರೇಷ್ಠರನ್ನಾಗಿ ಮಾಡಿ ಎಂದು
ಕೇಳಿಕೊಳ್ಳುತ್ತಾರೆ. ಭಾರತ ಶ್ರೇಷ್ಠಾಚಾರಿಯಾಗಿತ್ತು, ಈಗಿಲ್ಲ.
ಭ್ರಷ್ಟಾಚಾರಿಗಳೇ ಶ್ರೇಷ್ಠಾಚಾರಿಯಾಗುತ್ತಾರೆ. ಭಾರತದ ಹೊಸ ರಚನೆಯ ಕಥೆಯನ್ನು ಯಾರೂ ತಿಳಿದೇ ಇಲ್ಲ.
ಚಿತ್ರಗಳ ಮೂಲಕ ಚೆನ್ನಾಗಿ ತಿಳಿಸಿ ಕೊಡಲು ಸಾಧ್ಯವಿದೆ. ಅಂತಹ ಚಿತ್ರಗಳನ್ನು ಮಾಡಬೇಕಾಗಿದೆ.
ಪ್ರತಿಯೊಂದು ಸೇವಾಕೇಂದ್ರದಲ್ಲಿ ಪ್ರದರ್ಶನಿಯ ಚಿತ್ರಗಳು ಇರಬೇಕು. ತಂದೆಯು ಸಲಹೆಯನ್ನು
ಕೊಡುತ್ತಾರೆ. ಒಂದುವೇಳೆ ನಮ್ಮ ಬಳಿ ಪ್ರದರ್ಶನಿ ಚಿತ್ರಗಳು ಇಲ್ಲವೆಂದು ಪತ್ರವನ್ನು ಬರೆದರೆ
ತಂದೆಯು ಅದನ್ನು ಮಾಡಿಸಿ ಕಳುಹಿಸಿಕೊಡಬೇಕೆಂದು ಸಲಹೆಯನ್ನು ಕೊಡುತ್ತೇವೆ. ಈ ಚಿತ್ರಗಳು ಬಹಳ ಅರ್ಥ
ಸಹಿತವಾಗಿವೆ. ನಾವು ತಂದೆಯ ಮಕ್ಕಳಾಗಿದ್ದೇವೆ ಎಂಬುದು ಮೊಟ್ಟ ಮೊದಲು ಬುದ್ಧಿಯಲ್ಲಿರಬೇಕು.
ಭಗವಂತನು ಸ್ವರ್ಗದ ರಚಯಿತನಾಗಿದ್ದಾರೆ. ನರಕವನ್ನು ರಾವಣನು ರಚಿಸುತ್ತಾನೆ. ಗೋಲದ ಮೇಲೆ 10
ತಲೆಯುಳ್ಳಂತಹ ರಾವಣನನ್ನು ಮಾಡಿಸಿ. ಸ್ವರ್ಗದ ಗೋಲದ ಮೇಲೆ ಚತುರ್ಭುಜನನ್ನು ತೋರಿಸಿ. ಇದು
ರಾಮರಾಜ್ಯ, ಇದು ರಾವಣ ರಾಜ್ಯ ಎಂತಲೂ ಬರೆಯಬಹುದು. ಈ ಸಮಯದಲ್ಲಿ ರಾವಣನು ಸರ್ವವ್ಯಾಪಿಯಾಗಿದ್ದಾನೆ,
ಅಲ್ಲಿ ರಾಮನು ಸರ್ವವ್ಯಾಪಿಯಾಗಿದ್ದಾನೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಗಾಯನ ಮಾಡಲಾಗುತ್ತದೆ,
ಆತ್ಮ-ಪರಮಾತ್ಮರು ಬಹಳ ಕಾಲ ಅಗಲಿದ್ದರು, ಯಾವಾಗ ಸದ್ಗುರು ದಲ್ಲಾಳಿಯಾಗಿ ಸಿಕ್ಕಿದರೋ ಆಗ ಸುಂದರ
ಮಿಲನವಾಯಿತು. ಅಂದಾಗ ಅವರು ಅವಶ್ಯವಾಗಿ ಬರುತ್ತಾರಲ್ಲವೆ. ಈ ಲೆಕ್ಕವನ್ನು ಯಾರೂ ತಿಳಿದುಕೊಂಡಿಲ್ಲ.
ಮೊಟ್ಟ ಮೊದಲು ದೇವಿ-ದೇವತೆಗಳೇ ಅಗಲಿ ಹೋಗುತ್ತಾರೆ. ಇದು ಜ್ಞಾನವಾಗಿದೆ, ಇದನ್ನು ಯಾರಿಗೆ ಬೇಕಾದರೂ
ತಿಳಿಸಬಹುದು. ಆತ್ಮಗಳ ತಂದೆಯಾಗಿದ್ದಾರಲ್ಲವೆ. ಹೇ ಆತ್ಮ ತಮ್ಮ ಪರಮಪಿತ ಪರಮಾತ್ಮನ ಕರ್ತವ್ಯವನ್ನು
ತಿಳಿಸಿ, ತಿಳಿದುಕೊಂಡಿಲ್ಲವೇ, ತನ್ನ ತಂದೆಯ ಕರ್ತವ್ಯವನ್ನು ತಿಳಿಯದೇ ಇರುವ ಮಕ್ಕಳು ಯಾರೂ
ಇರುವುದಿಲ್ಲ ತಂದೆ ಕುಳಿತು ತಿಳಿಸುತ್ತಾರೆ. ನೀವು ನಿಮ್ಮ ಜನ್ಮವನ್ನು ತಿಳಿದುಕೊಂಡಿಲ್ಲ, ನಾನು
ತಿಳಿಸಿಕೊಡುತ್ತೇನೆಂದು ತಂದೆಯು ಹೇಳುತ್ತಾರೆ. ಮೊಟ್ಟ ಮೊದಲು ದೇವಿ-ದೇವತಾ ಧರ್ಮದವರು ಇಷ್ಟು
ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಅನ್ಯ ಧರ್ಮದವರು ಎಷ್ಟು ಜನ್ಮಗಳನ್ನು ತೆಗೆದುಕೊಳ್ಳಬಹುದು
ಎಂಬುದನ್ನು ಲೆಕ್ಕ ಹಾಕಿ. ಕೊನೆ ಪಕ್ಷ ಇಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂದು ಸಿದ್ಧ ಮಾಡಿ
ಹೇಳಬೇಕು. ವೃಕ್ಷವು ವೃದ್ಧಿಯಾಗುತ್ತಾ ಹೋಗುತ್ತದೆ. ಮೊಟ್ಟ ಮೊದಲು ದೇವಿ-ದೇವತಾ ಧರ್ಮವಿತ್ತು.
ಅವರದೇ 84 ಜನ್ಮಗಳೆಂದು ಹೇಳಲಾಗುತ್ತದೆ. ಭಾರತದ ಜ್ಞಾನವಲ್ಲವೆ. ಪ್ರಾಚೀನ ಭಾರತದ ಜ್ಞಾನವನ್ನು
ಯಾರು ಕೊಟ್ಟರು? ಕೃಷ್ಣನನ್ನು ಎಲ್ಲರೂ ಒಪ್ಪುವುದಿಲ್ಲ. ಈ ಜ್ಞಾನವನ್ನು ಭಗವಂತನೇ ತಿಳಿಸುತ್ತಾರೆ,
ಅವರು ಜ್ಞಾನಪೂರ್ಣ, ಪರಮಪಿತ ಪರಮಾತ್ಮನಾಗಿದ್ದಾರಲ್ಲವೆ. ಬ್ರಹ್ಮನಿಗೂ ಸಹ ಜ್ಞಾನಪೂರ್ಣನೆಂದು
ಹೇಳುವುದಿಲ್ಲ, ಕೃಷ್ಣನಿಗೂ ಸಹ ಹೇಳುವುದಿಲ್ಲ. ಕೃಷ್ಣನ ಮಹಿಮೆಯೇ ಬೇರೆಯಾಗಿದೆ. ಇದನ್ನು
ತಿಳಿಸಿಕೊಡಲು ಬಹಳ ಸ್ಪಷ್ಟವಾದ ಜ್ಞಾನವಾಗಿದೆ. ಭಗವಂತನಂತೂ ಎಲ್ಲರಿಗೂ ಒಬ್ಬರೇ ನಿರಾಕಾರ ಪರಮಪಿತ
ಪರಮಾತ್ಮನಾಗಿದ್ದಾರೆ. ಅವರು ರಚೈತನೂ ಆಗಿದ್ದಾರೆ, ಕೃಷ್ಣನಂತೂ ರಚನೆಯಾಗಿದ್ದಾರೆ. ಶ್ರೇಷ್ಠಾತಿ
ಶ್ರೇಷ್ಠ ಭಗವಂತ ಒಬ್ಬರಲ್ಲವೆ. ಅವರನ್ನು ಸರ್ವವ್ಯಾಪಿಯೆಂದು ಹೇಳಲು ಸಾಧ್ಯವಿಲ್ಲ. ಭಾರತದಲ್ಲಿ
ಎಲ್ಲರಿಗಿಂತ ದೊಡ್ಡವರು ರಾಷ್ಟ್ರಪತಿ ಮತ್ತೆ ನಂಬರ್ವಾರ್ ಇರುತ್ತಾರೆ. ಎಲ್ಲರ ಕರ್ತವ್ಯವೂ ಒಂದೇ
ಆಗಿದೆ ಎಂದಲ್ಲ. ಪ್ರತಿಯೊಬ್ಬ ಆತ್ಮನಿಗೆ ಅವಿನಾಶಿ ಪಾತ್ರವು ಸಿಕ್ಕಿದೆ- ಇದನ್ನು ಸಿದ್ಧ ಮಾಡಬೇಕು.
ಪರಸ್ಪರದಲ್ಲಿ ಸಲಹೆಯನ್ನು ತೆಗೆದುಕೊಂಡು ಸೇವೆಯ ಯೋಜನೆಯನ್ನು ಮಾಡಬೇಕು. ಆದರೆ ಬುದ್ಧಿಯ ಲೈನ್
ಕ್ಲಿಯರ್ ಇಲ್ಲವೆಂದರೆ, ಯಾವುದೇ ವಿಕಾರವಿತ್ತೆಂದರೆ ಅಥವಾ ನಾಮ-ರೂಪದಲ್ಲಿ ಸಿಲುಕಿ ಹಾಕಿಕೊಂಡರೆ
ಸೇವೆಯನ್ನು ಮಾಡಲು ಸಾಧ್ಯವಿಲ್ಲ. ಇದರಲ್ಲಿ ಬುದ್ಧಿಯ ಲೈನ್ ಬಹಳ ಸ್ಪಷ್ಟವಾಗಿರಬೇಕು. ಫಲಿತಾಂಶವಂತೂ
ಅಂತ್ಯದಲ್ಲೇ ಹೊರ ಬೀಳುತ್ತದೆ. ಈಗಂತೂ ಎಲ್ಲರೂ ನಂಬರ್ವಾರ್ ಆಗಿದ್ದಾರೆ. ಮನುಷ್ಯರು ವ್ಯಾಸ ಭಗವಂತ
ಶಾಸ್ತ್ರವನ್ನು ರಚಿಸಿದರೆಂದು ಹೇಳುತ್ತಾರೆ. ವ್ಯಾಸನಂತೂ ಭಗವಂತನಾಗಲು ಸಾಧ್ಯವಿಲ್ಲ. ಧರ್ಮ
ಶಾಸ್ತ್ರಗಳು ನಾಲ್ಕು ಇವೆ. ಭಾರತದ ಧರ್ಮ ಶಾಸ್ತ್ರವು ಒಂದೇ ಗೀತಾ ಮಾತೆಯಾಗಿದೆ. ಆಸ್ತಿಯಂತೂ
ಅವರಿಂದಲೇ ಸಿಗುತ್ತದೆ. ತಾಯಿಯ ಮೂಲಕ ತಂದೆಯ ಆಸ್ತಿಯು ಸಿಗುತ್ತದೆ. ಗೀತಾ ಮಾತೆಯ ರಚಯಿತ
ತಂದೆಯಾಗಿದ್ದಾರೆ. ಗೀತೆಯ ಮೂಲಕವೇ ಪ್ರಾಚೀನ ಸಹಜ ರಾಜಯೋಗದ ಜ್ಞಾನವನ್ನು ಕೊಡಲಾಗುತ್ತದೆ.
ಗೀತೆಯಂತೂ ಭರತ ಖಂಡದ ಶಾಸ್ತ್ರವಾಗಿದೆ. ಇದರ ನಂತರ ಇಸ್ಲಾಂ ಧರ್ಮ ಶಾಸ್ತ್ರ, ಬೌದ್ಧ ಧರ್ಮ,
ಕ್ರಿಶ್ಚಿಯನ್ ಧರ್ಮದ್ದು ಎಲ್ಲರದೂ ಅವರವರದ್ದೇ ಆಗಿದೆ. ಇದನ್ನು ಯಾರು ಹೇಳಿದರು ಎಂಬುದೂ ಸಹ
ತಿಳಿಯಬೇಕಲ್ಲವೆ - ಗೀತೆಯಂತೂ ಎಲ್ಲಾ ಧರ್ಮದ ತಂದೆ-ತಾಯಿಯಾಗಿದೆ, ಮತ್ತೆಲ್ಲವೂ ಅದರ ಮಕ್ಕಳಾಗಿವೆ.
ಗೀತೆಯಂತೂ ನಂತರ ರಚಿಸಲ್ಪಟ್ಟಿದೆ. ಇಷ್ಟೆಲ್ಲಾ ವೇದ-ಉಪನಿಷತ್ತ್ ಯಾವ ಧರ್ಮದ್ದಾಗಿದೆ? ಇದನ್ನು
ಯಾರು ನುಡಿಸಿದರೆಂದು ತಿಳಿಯಬೇಕಲ್ಲವೆ. ಇದರಿಂದ ಯಾವ ಧರ್ಮವು ಹುಟ್ಟಿಕೊಂಡಿತು, ಯಾವುದೇ
ಧರ್ಮವಿಲ್ಲ. ಗೀತೆಯು ಖಂಡನೆ ಮಾಡಲ್ಪಟ್ಟಿದೆ ಎಂಬುದನ್ನು ಮೊಟ್ಟ ಮೊದಲು ಸಿದ್ಧ ಮಾಡಬೇಕು. ತಂದೆಯ
ಬದಲಾಗಿ ಮಗನ ಹೆಸರನ್ನು ಹಾಕಲಾಗಿದೆ. ಪ್ರತಿಯೊಬ್ಬರ ಜೀವನ ಚರಿತ್ರೆ ಬೇರೆ-ಬೇರೆಯಾಗಿದೆ. ಎಲ್ಲಾ
ಧರ್ಮವನ್ನು ಮರೆತು ನೀನು ನನ್ನೊಬ್ಬನನ್ನೇ ನೆನಪು ಮಾಡು ಎಂದು ತಂದೆಯು ತಿಳಿಸುತ್ತಾರೆ. ಪರಮಾತ್ಮ
ಆತ್ಮರಿಗೆ ಹೇಳುತ್ತಾರೆ ನೀವು ಅಶರೀರಿಯಾಗಿ ನನ್ನನ್ನು ನೆನಪು ಮಾಡಿ, ಅಶರೀರಿ ತಂದೆಯೇ ಹೇಳಲು
ಸಾಧ್ಯ ಸನ್ಯಾಸಿಗಳಂತೂ ಈ ರೀತಿ ಹೇಳಲು ಸಾಧ್ಯವಿಲ್ಲ. ಇದು ಗೀತೆಯ ಅಕ್ಷರವಾಗಿದೆ. ಎಲ್ಲಾ
ಧರ್ಮದವರಿಗೆ ಅಶರೀರಿಗಳಾಗಿ ಎಂದು ಹೇಳುತ್ತಾರೆ. ಈಗ ನಾಟಕ ಪೂರ್ಣವಾಗಲಿದೆ. ದೇಹ ಸಹಿತವಾಗಿ ದೇಹದ
ಎಲ್ಲಾ ಸಂಬಂಧವನ್ನು ತ್ಯಾಗ ಮಾಡಿ ನನ್ನೊಬ್ಬನನ್ನೇ ನೆನಪು ಮಾಡಿ ಆಗ ನೀವು ನನ್ನ ಬಳಿ ಬರುತ್ತೀರಿ
ಎಂಬ ಮಂತ್ರವು ಎಲ್ಲರಿಗೂ ಸಿಕ್ಕಿದೆ. ಮುಕ್ತಿಯ ನಂತರ ಜೀವನ್ಮುಕ್ತಿಯು ಇದ್ದೇ ಇದೆ. ಮುಕ್ತಿಯ
ಮೂಲಕವೇ ಜೀವನ್ಮುಕ್ತಿಯ ಪದವಿಯಾಗಿದೆ. ಯಾರೆಲ್ಲಾ ಮನುಷ್ಯರು ಬರುತ್ತಾರೆ, ಅವರು ಮೊದಲು ಸತೋ, ರಜೋ,
ತಮೋದಲ್ಲಿ ಹೋಗುತ್ತಾರೆ. ಈ ತಿಳುವಳಿಕೆಯು ಎಷ್ಟೊಂದು ಚೆನ್ನಾಗಿದೆ. ಆದರೆ ಮಕ್ಕಳು ಒಂದು
ಕಿವಿಯಿಂದ ಕೇಳಿ ಮತ್ತೊಂದು ಕಿವಿಯಿಂದ ತೆಗೆದುಹಾಕಿ ಬಿಡುತ್ತಾರೆ. ಇದಂತೂ ಬಹಳ ಸಹಜವಾಗಿದೆ.
ನೀವು ಪ್ರತಿಯೊಂದು ಸ್ಥಳದಲ್ಲಿ ಪ್ರದರ್ಶನಿಯನ್ನು ಮಾಡಿ, ಒಂದು ದಿನ ಪತ್ರಿಕೆಯಲ್ಲಿಯೂ ಹಾಕಿಸಬಹುದು,
ಇದಕ್ಕಾಗಿ ಖರ್ಚು ಮಾಡಬಹುದು. ಎಲ್ಲರೂ ತಿಳಿದುಕೊಳ್ಳಲಿ, ದಿನ ಪತ್ರಿಕೆಯಲ್ಲಿ ಅವಶ್ಯವಾಗಿ
ಹಾಕಿಸಬೇಕು. ಮಕ್ಕಳಿಗೆ ಬಹಳಷ್ಟು ನಶೆಯಿರಬೇಕು. ಬಾಕಿ ಸಮಯ ಬಹಳ ಸ್ವಲ್ಪವೇ ಉಳಿದಿದೆ. ಅತೀಂದ್ರಿಯ
ಸುಖವನ್ನು ಗೋಪ-ಗೋಪಿಯರೊಂದಿಗೆ ಕೇಳಿ ಎಂಬ ಗಾಯನವಿದೆ. ಗೋಪಿವಲ್ಲಭನ ಗೋಪ-ಗೋಪಿಯರಾಗಿದ್ದಾರೆ.
ಗೋಪ-ಗೋಪಿಯರು ಸತ್ಯಯುಗದಲ್ಲಿಯೇ ಆಗಲಿ, ಕಲಿಯುಗದಲ್ಲಿಯೇ ಆಗಲಿ ಇರುವುದಿಲ್ಲ. ಅಲ್ಲಿ ಲಕ್ಷ್ಮಿ
ದೇವಿ ಮತ್ತು ರಾಧೆ ದೇವಿಯಿರುತ್ತಾರೆ. ಗೋಪ-ಗೋಪಿಯರು ಈಗ ಇದ್ದಾರೆ. ಗೋಪಿ ವಲ್ಲಭನ ಮಕ್ಕಳು
ಮೊಮ್ಮಕ್ಕಳಾಗಿದ್ದಾರೆ ಅಂದಾಗ ತಾತನೂ ಸಹ ಇದ್ದಾರೆ. ತಾತ, ತಂದೆ ಮತ್ತು ತಾಯಿ - ಈ ಹೊಸ ರಚನೆಯು
ಸಂಗಮದಲ್ಲಿಯೇ ಆಗುತ್ತದೆ. ತಂದೆ ಹೇಳುತ್ತಾರೆ, ನಾನು ಕಲ್ಪ-ಕಲ್ಪ, ಕಲ್ಪದ ಸಂಗಮಯುಗದಲ್ಲಿ ಹೊಸ
ಪ್ರಪಂಚವನ್ನಾಗಿ ಮಾಡಲು ಬರುತ್ತೇನೆ. ಆಸುರೀ ಸಂತಾನರಿಂದ ನೀವು ಈಶ್ವರೀಯ ಸಂತಾನರಾಗಿದ್ದೀರಿ.
ನಂತರ ದೈವೀ ಸಂತಾನರಾಗುತ್ತೀರಿ. ನಂತರ ಕ್ಷತ್ರಿಯ, ವೈಶ್ಯ, ಶೂದ್ರ ಸಂತಾನರಾಗುತ್ತೀರಿ 84
ಜನ್ಮಗಳಲ್ಲಿ. ನಂತರ ಜೊತೆ ಜೊತೆಗೆ ವೃದ್ಧಿಯೂ ಆಗುತ್ತದೆ ವೃಕ್ಷವೂ ಪೂರ್ಣವಾಗಬೇಕು. ಪ್ರಳಯವೂ
ಆಗುವುದಿಲ್ಲ ಭಾರತವು ಅವಿನಾಶಿ ಖಂಡವಾಗಿದೆ, ಭಾರತದ ಬಹಳ ಮಹಿಮೆ ಮಾಡಬೇಕು. ಭಾರತ ಎಲ್ಲಾ
ಖಂಡಗಳಿಗಿಂತ ಶ್ರೇಷ್ಠವಾಗಿದೆ. ಇದು ವಿನಾಶವೆಂದೂ ಸಹ ಆಗುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆ ಮತ್ತು ದಾದಾರವರ ನೆನಪು, ಪ್ರೀತಿ ಹಾಗೂ ಶುಭ
ರಾತ್ರಿ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಯಾವುದೇ
ಕಾರಣಗಳನ್ನು ಹೇಳದೇ ತಂದೆಯ ಶ್ರೀಮತದಂತೆ ನಡೆಯುತ್ತಿರಬೇಕು. ಸರ್ವಿಸನ ಆಧಾರವನ್ನು ಕೊಡಬೇಕಾಗಿದೆ.
2. ನಾವು ಈಶ್ವರೀಯ ಸಂತಾನದವರಾಗಿದ್ದೇವೆ, ನಮ್ಮದು ಶ್ರೇಷ್ಟಾತಿ ಶ್ರೇಷ್ಠ ಸಂಬಂಧವಾಗಿದೆ, ಇದನ್ನು
ಮರೆಯಬಾರದು. ನಿಶ್ಚಯಬುದ್ದಿಯವರಾಗಬೇಕು ಮತ್ತು ಮಾಡಬೇಕಾಗಿದೆ.
ವರದಾನ:
ಬ್ರಾಹ್ಮಣ
ಜನ್ಮದ ವಿಶೇಷತೆ ಮತ್ತು ವಿಚಿತ್ರತೆಯನ್ನು ಸ್ಮತಿಯಲ್ಲಿಡುತ್ತಾ ಸೇವೆ ಮಾಡುವಂತಹ ಸಾಕ್ಷಿ ಭವ.
ಈ ಬ್ರಾಹ್ಮಣ
ಜನ್ಮ ದಿವ್ಯ ಜನ್ಮವಾಗಿದೆ. ಸಾಧಾರಣ ಜನ್ಮಧಾರಿ ಆತ್ಮಗಳು ತಮ್ಮ ಹುಟ್ಟಿದ ದಿನವನ್ನು ಬೇರೆಯಾಗಿ
ಆಚರಿಸುತ್ತಾರೆ, ಮದುವೆಯಾದ ದಿನವನ್ನು ಫೌಂಡರ್ಸ್ ಡೇ ಅನ್ನು ಬೇರೆಯಾಗಿ ಆಚರಿಸುತ್ತಾರೆ, ಆದರೆ
ನಿಮ್ಮ ಹುಟ್ಟಿದ ದಿನವೂ ಅದೇ ಆಗಿದೆ ಮದರ್ ಡೇ, ಫಾದರ್ ಡೇ, ಎನ್ಗೇಜ್ಮೆಂಟ್ ಡೇ ಎಲ್ಲವೂ ಒಂದೇ
ಆಗಿದೆ. ಏಕೆಂದರೆ ನಿಮ್ಮಲ್ಲರ ಭಾಷೆ ಇದೇ ಆಗಿದೆ - ಒಬ್ಬ ತಂದೆಯ ವಿನಹ ಬೇರೊಬ್ಬರಿಲ್ಲ. ಆದ್ದರಿಂದ
ಈ ಜನ್ಮದ ವಿಶೇಷತೆ ಮತ್ತು ವಿಚಿತ್ರತೆಯನ್ನು ಸ್ಮತಿಯಲ್ಲಿಡುತ್ತಾ ಸೇವೆಯ ಪಾತ್ರವನ್ನು ಅಭಿನಯಿಸಿ.
ಸೇವೆಯಲ್ಲಿ ಒಬ್ಬರಿನ್ನೊಬ್ಬರಿಗೆ ಜೊತೆಗಾರರಾಗಿ ಸ್ವಲ್ಪವೂ ಸಹ ಯಾರ ಮೇಲಾದರೂ ವಿಶೇಷವಾದ ಒಲವು
ಇಲ್ಲದಿರಲಿ.
ಸ್ಲೋಗನ್:
ನಿಶ್ಚಿಂತ
ಚಕ್ರವರ್ತಿ ಅವರೇ ಆಗಿದ್ದಾರೆ ಯಾರ ಜೀವನದಲ್ಲಿ ನಿರ್ಮಾಣತೆ ಮತ್ತು ಅಧಿಕಾರದ ಬ್ಯಾಲೆನ್ಸ್ ಇರುವುದು.